== ಆಣೆಕಟ್ಟು == ಹೇಮಾವತಿ ನದಿಯು ಕಾವೇರಿ ನದಿಯ ಉಪನದಿಯಾಗಿದೆ. ಹಾಸನ ಜಿಲ್ಲೆಯ ಗೊರೂರು ಗ್ರಾಮದ ಬಳಿ ಈ ಅಣೆಕಟ್ಟನ್ನು ಕಟ್ಟಲಾಗಿದೆ. ಕಾವೇರಿ ನದಿಯ ಮೇಲ್ಮುಖ ಭಾಗವಾಗಿ ಹೇಮಾವತಿ ಆಣೆಕಟ್ಟನ್ನು ಪರಿಗಣಿಸಲಾಗುತ್ತದೆ. ಕಾವೇರಿಯ ನದಿಯ ಪ್ರಮುಖ ಉಪನದಿ ಹೇಮಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. == ನಿರ್ಮಾಣ == ಹೇಮಾವತಿ ಅಣೆಕಟ್ಟನ್ನು ೧೯೭೯ ರಲ್ಲಿ ಹಾಸನ ಜಿಲ್ಲೆಯ ಗೊರೂರಿನಲ್ಲಿ ಕಟ್ಟಲು ಕಾರ್ಯ ಆರಂಭವಾಯಿತು. == ಉಪಯೋಗ == ಹೇಮಾವತಿ ಅಣೆಕಟ್ಟನ್ನು ಎಡದಂಡೆ ಮತ್ತು ಬಲದಂಡೆ ಕಾಲುವೆಗಳಲ್ಲಿ ವಿಂಗಡಿಸಲಾಗಿದೆ. ಇದರ ಜೊತೆ ಏತ ನೀರಾವರಿಗಾಗಿ ಅರಕಲಗೂಡು, ಬಾಗೂರು-ನವಿಲೆ ಮುಂತಾದೆಡೆ ಕಾಲುವೆ ನಿರ್ಮಿಸಲಾಗಿದೆ. == ವಿಸ್ತೀರ್ಣ == ಉದ್ದ: ೪೬೯೨ ಮೀಟರ್ (೧೫೩೯೩.೭ ಅಡಿ) ಎತ್ತರ: ೫೮.೫ ಮೀಟರ್ (೧೯೧.೯೩ ಅಡಿ) ಸಂಗ್ರಹ ಸಾಮರ್ಥ್ಯ: ೧೦೫.೬೩ ಕೋಟಿ ಸಿಎಂ೩ (೩೭ ಟಿ ಎಂಸಿ) ಗೇಟುಗಳು: ೬ ಅಚ್ಚುಕಟ್ಟು ಪ್ರದೇಶ: ೨೮೧೦ ಚದರ ಕಿಮೀ. (೧೬೦೦೦ ಎಕರೆ) ಮುಳುಗಡೆ ಪ್ರದೇಶ: ೪೬ ಹಳ್ಳಿಗಳು == ಉದ್ದೇಶಗಳು == ಹೇಮಾವತಿ ಆಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರನ್ನು ನೀರಾವರಿ ಮತ್ತು ಕುಡಿಯುವ ನೀರುಬಳಕೆ - ಈ ಎರಡು ಉದ್ದೇಶಗಳಿಗೆ ಬಳಸಲಾಗುತ್ತಿದೆ. == ಸ್ವಾರಸ್ಯ == ಶೆಟ್ಟಿಹಳ್ಳಿಯ ರೋಸರಿ ಚರ್ಚ್, ಅಣೆಕಟ್ಟಿನ್ನು ನಿರ್ಮಿಸುವ ಸಂಧರ್ಭದಲ್ಲಿ ಮುಳುಗಡೆಯಾಗಿತ್ತು. ಬೇಸಿಗೆಯ ಸಂಧರ್ಭದಲ್ಲಿ, ಆಣೆಕಟ್ಟಿನಲ್ಲಿ ನೀರು ಕಡಿಮೆಯಾದಾಗ ಚರ್ಚ್ ಅನ್ನು ಕಾಣಬಹುದು == ಉಲ್ಲೇಖಗಳು ==